ಆನಂದಮಯಾ ಈ ಜಗ ಹೃದಯಾ ಏತಕೆ ಭಯ ಮಾಣೋ ಸೂರ್ಯೋದಯಾ ಚಂದ್ರೋದಯಾ ದೇವರ ದಯ ಕಾಣೋ ಆನಂದಮಯಾ ಈ ಜಗ ಹೃದಯಾ ॥ ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ ಸೂರ್ಯನು ಬರಿ ರವಿಯಲ್ಲವೋ ಆ ಭ್ರಾಂತಿಯ ಮಾಣೋ ಆನಂದಮಯಾ ಈ ಜಗ ಹೃದಯಾ ॥೧॥ ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ ಆನಂದಮಯಾ ಈ ಜಗ ಹೃದಯಾ ॥೨॥ ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ ॥ ೩॥ ಆನಂದಮಯ ಈ ಜಗ ಹೃದಯಾ ಏತಕೆ ಭಯ ಮಾಣೋ, ಸೂರ್ಯೋದಯಾ ಚಂದ್ರೋದಯಾ ದೇವರ ದಯ ಕಾಣೋ ಆನಂದಮಯ ಈ ಜಗ ಹೃದಯಾ
geetmanjusha.com © 1999-2020 Manjusha Umesh | Privacy | Community Guidelines