Kannada Songs

Kannada Songs's Lyrics

Sihigaali Sihigaali / ಸಿಹಿಗಾಳಿ ಸಿಹಿಗಾಳಿ

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ॥

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೇ ಸಾಕು ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದಾ ಗೀತೆ ಬರೆಯೋಣ ಬಾ
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ॥೧॥

ಬಾನಾಡಿಗೊಂದು ಸವಿಮಾತು ಕಲಿಸುವ
ಆ ವೀಣೆಗೊಂದು ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ನಾನಾನಾ ಬಾಳಿನಾ ಅರ್ಥವೇ ಪ್ರೇಮವೆಂಬುದಲ್ಲವೇ 
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ ॥೨॥

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೇ ಸಾಕು ದಿನವು ಬೆರೆಯಲೇಬೇಕು
ಪ್ರೇಮ ಅಮೃತದಾ ಗೀತೆ ಬರೆಯೋಣ ಬಾ
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ತನಾನಾನಾನಾನಾನಾನಾನಾನಾನಾನಾನಾ

Additional Information

ಗೀತಕಾರ : ಕೆ. ಕಲ್ಯಾಣ್, ಗಾಯಕರು: ನಂದಿತಾ , ಇಳಯರಾಜ , ಸಂಗೀತಸಂಯೋಜಕ: :- ಇಳಯರಾಜ , ಆಲ್ಬಮ್/ಚಲನಚಿತ್ರ : -ಆದಿನಗಳು (೨೦೦೭) / Lyricist : K.Kalyan, Singers : Nandita, Ilairaja, Music Director : Ilaiyaraja, Album/Movie : Aa Dinagalu (2007)

Kannada Songs Lyrics Submitted By

Shilpa Gavas

September 07 2016

geetmanjusha.com © 1999-2020 Manjusha Umesh | Privacy | Community Guidelines