Kannada Songs

Kannada Songs's Lyrics

Bhagyada Laxmi Baramma / ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ 
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ||
 
ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ
ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ
ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ 
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥೧॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
 
ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ದಿಯ ತೋರೆ
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ॥೨॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
 
ಅತ್ತಿತ್ತಗಲದೆ ಭಕ್ತರ ಮನೆಯೂಳು
ನಿತ್ಯಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುತ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿಬೊಂಬೆ।।೩॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ಸಂಖ್ಯೆ ಇಲ್ಲದಾ ಭಾಗ್ಯವ ಕೊಟ್ಟು
ಕಂಕಣ ಕೈಯಾ ತಿರುವುತ ಬಾರೆ 
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದರಾಣಿ ॥೪॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದಾ ಪೂಜೆಯ ವೇಳೆಗೆ 
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದಾ ಪೂಜೆಯ ವೇಳೆಗೆ 
ಅಕ್ಕರೆ ಉಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ॥೫॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ಬಾರಮ್ಮಾ ಬಾರಮ್ಮಾ ಬಾರಮ್ಮಾ ನಮ್ಮ ಬಾರಮ್ಮಾ
ಭಾಗ್ಯದಾ ಭಾಗ್ಯದಾ ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

Additional Information

ಗೀತಕಾರ :ಪುರಂದರದಾಸರು, ಗಾಯಕ:ಪಂ. ಭೀಮಸೇನ ಜೋಶಿ ಸಂಗೀತ ಸಂಯೋಜಕ: :-, ಆಲ್ಬಮ್/ಚಲನಚಿತ್ರ : -/ Lyricist : Purandaradasaru, Singer : Pt. Bhimsen Joshi , Music Director : - , Album/Movie :

Kannada Songs Lyrics Submitted By

Shilpa Gavas

September 07 2016

geetmanjusha.com © 1999-2020 Manjusha Umesh | Privacy | Community Guidelines