Kannada Songs

Kannada Songs's Lyrics

Chinnada Malige Hoove / ಚಿನ್ನದ ಮಲ್ಲಿಗೆ ಹೂವೆ

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ 
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ 
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ 
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ॥ 
 
ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ
ನಿನ್ನನ್ನು  ಕಂಡ  ಕಣ್ಣು ಬೇರೇನೂ ನೋಡ  ದಿನ್ನು
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು 
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ ಒಲವು ಬೇಕೆಂದು ಬರುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು॥೧॥
 
ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ  ನುಡಿದು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ  ನುಡಿದು
ಆನಂದದಾ,  ಕಂಬನಿ,  ತಂದೆ  ನೀನು॥೨॥
 
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ 
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ 
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

Additional Information

ಗೀತಕಾರ : ಚಿ. ಉದಯಶಂಕರ, ಗಾಯಕರು: ಡಾ.ರಾಜಕುಮಾರ್ಎ - ಸ್. ಜಾನಕಿ, ಸಂಗೀತ ಸಂಯೋಜಕ: ಜಿ. ಕೆ. ವೆಂಕಟೇಶ್, ಆಲ್ಬಮ್/ಚಲನಚಿತ್ರ : ಹುಲಿಯ ಹಾಲಿನ ಮೇವು (೧೯೭೯) / Lyricist : Chi. Udaya Shankar, Singer : Dr. RajKumar - S Janaki, Music Director : G. K. Venkatesh, Album/Movie : Huliya Haalina Mevu (1979)

Kannada Songs Lyrics Submitted By

Shilpa Gavas

August 20 2016

geetmanjusha.com © 1999-2020 Manjusha Umesh | Privacy | Community Guidelines