Kannada Songs

Kannada Songs's Lyrics

Neen Yello Naan Ale / ನೀನ್ ಎಲ್ಲೊ ನಾನ್ ಏಲ್

ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ
ನಾನ್ನಿನ್ನಾ ಕಣ್ಣಾಗಿ ನೀನಾದೆ ನದಿಯಾಗಿ 
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ 
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ
ನಾನ್ನಿನ್ನಾ ಕಣ್ಣಾಗಿ ನೀನಾದೆ ನದಿಯಾಗಿ 
ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ ॥

ಬಳಿಯಲೆ ಬಂಗಾರ ಇರುವಾಗಾ ಅದನು ನೊಡದೇ 
ಅಲೆಯುತಾ ದಿನಬಳಲಿದೆ ಕಣ್ಣೀಗ ತೆರೆಯಿತು 
ಬಯಸಿದ ಸೌಭಾಗ್ಯ ಕೈ ಸೇರಿ ಹರುಷಾ ಮೂಡಿತು 
ಒಲವಿನಾ ಲತೆ ಚಿಗುರಿತು ಕನಸಿನ್ನು ಮುಗಿಯಿತು 
ಇನ್ನೆಂದು ನಿನ್ನನ್ನು, ಚೆಲುವೆ ಬಿಡಲಾರೆನಾ
ಓ ಬಾಗಿಲಿಗೆ ಹೊಸಿಲಾಗಿ ತೊರಣದಾ ಹಸಿರಾಗಿ
ಪೂಜಿಸುವಾ ಹೂವಾಗಿ ಇಂಪಾದಾ ಹಾಡಾಗಿ
ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ ನಾ ಬರುವೆ॥೧॥ 
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ
 
ಬದುಕಿನಾ ಹಾಡಲ್ಲಿ ಜೊತೆಯಾಗಿ ಶ್ರುತಿಯಾ ಬೆರೆಸುವೆ
ರಾಗದಿ ಹೊಸರಾಗದಿ ಇಂಪನ್ನು ತುಂಬುವೆ
ಹೃದಯದಾ ಗುಡಿಯಲ್ಲಿ ಓನಲ್ಲೆ ನಿನ್ನಾ ಇರಿಸುವೆ
ಪ್ರೀತಿಯಾ ಸುಮದಿಂದಲಿ ಸಿಂಗಾರಾ ಮಾಡುವೆ
ಆನಂದಾ ಹೆಚ್ಚಾಗಿ ಕಣ್ಣೀರು ತುಂಬಿದೆ
ನಿನ್ನೊಡಲಾ ಉಸಿರಾಗಿ ನಿನ್ನಾಸೆ ಕಡಲಾಗಿ
ಚೆಂದುಟಿಯಾ ನಗೆಯಾಗಿ ಒಲವೆಂಬಾ ಸಿರಿಯಾಗಿ
ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ ನಾ ತರುವೆ॥೨॥
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ
ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ

Additional Information

ಗೀತಕಾರ : ಚಿ. ಉದಯಶಂಕರ, ಗಾಯಕರು: ಡಾ.ರಾಜಕುಮಾರ್ - ಎಸ್. ಜಾನಕಿ, ಸಂಗೀತ ಸಂಯೋಜಕ: ರಾಜನ್ - ನಾಗೇಂದ್ರ, ಆಲ್ಬಮ್/ಚಲನಚಿತ್ರ : ಚಲಿಸುವಮೋಡಗಳು (೧೯೮೨) / Lyricist : Chi. Udaya Shankar, Singer : Dr RajKumar - S Janaki, Music Director : Rajan-Nagendra, Album/Movie : Chalisuva Modagalu (1982)

Kannada Songs Lyrics Submitted By

Shilpa Gavas

August 12 2016

geetmanjusha.com © 1999-2020 Manjusha Umesh | Privacy | Community Guidelines