Kannada Songs

Kannada Songs's Lyrics

Kaanada Kadalige Hambaliside Mana / ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ, ಮನ…
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ 
ಕಾಣದ ಕಡಲಿಗೆ ಹಂಬಲಿಸಿದೆ ಮನ ||
 
ಕಾಣದ ಕಡಲಿನ ಮೊರೆತದ ಜೋಗುಳ 
ಒಳಗಿವಿಗಿಂದು ಕೇಳುತಿದೆ 
ಕಾಣದ ಕಡಲಿನ ಮೊರೆತದ ಜೋಗುಳ 
ಒಳಗಿವಿಗಿಂದು ಕೇಳುತಿದೆ 
ನನ್ನ ಕಲ್ಪನೆಯು ತನ್ನ ಕಡಲನೆ 
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 
ಎಲ್ಲಿರುವುದೋ ಅದು ಎಂತಿರುವುದೋ ಅದು 
ನೋಡಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದು ದಿನ ॥೧॥
ಕಾಣದ ಕಡಲಿಗೆ ಹಂಬಲಿಸಿದೆ ಮನ.
 
ಸಾವಿರ ಹೊಳೆಗಳು ತುಂಬಿ ಹರಿದರೂ 
ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ 
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ 
ಗಂಭೀರಾಂಬುಧಿ ತಾನಂತೆ 
ಮುನ್ನೀರಂತೆ, ಅಪಾರವಂತೆ,
ಕಾಣಬಲ್ಲೆನೆ ಒಂದು ದಿನ 
ಅದರೊಳು ಕರಗಲಾರೆನೆ ಒಂದು ದಿನ  ॥೨॥
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು ನಾನು 
ಎಂದಿಗಾದರು, ಎಂದಿಗಾದರು, ಎಂದಿಗಾದರೂ 
ಕಾಣದ ಕಡಲನು ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು 
ಕರಗಬಹುದೆ ನಾನು, ಕರಗಬಹುದೆ ನಾನು  ॥೩॥

Additional Information

ಗೀತಕಾರ : ಜಿ. ಎಸ್. ಶಿವರುದ್ರಪ್ಪ , ಗಾಯಕ: ಸಿ ಆಶ್ವಥ್, ಸಂಗೀತ ಸಂಯೋಜಕ: - , ಅಲ್ಬಮ್/ಚಲನಚಿತ್ರ : - / Lyricist : G. S. Shivarudrappa , Singer : C. Ashwath, Music Director : - , Album/Movie : -

Kannada Songs Lyrics Submitted By

Shilpa Gavas

July 28 2016

geetmanjusha.com © 1999-2020 Manjusha Umesh | Privacy | Community Guidelines