ಬೆಳದಿಂಗಳಾಗಿ ಬಾ,
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ
ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ
ಬಾಳಲಿ ತುಂಬಿದೇ ಉಲ್ಲಾಸವಾ
ನನ್ನೆದೆಯ ತಾಳ ನೀನು, ನನ್ನುಸಿರ ರಾಗ ನೀನು
ನನ್ನೊಡಲ ಜೀವನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ ।।೧।।
ಕಾವೇರಿ ತಾಯಿ ನನ್ನಾ, ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂ
ಆ ದೇವಿಯಾಣೆ ನೀನೆ ಸಂಗಾತಿ ಕೇಳೇ ಜಾಣೆ,
ನೀಡುವೆನು ಭಾಷೆಯಾ,ಬಿಡು ಚಿಂತೆಯಾ
ಈ ನಮ್ಮ ಪ್ರೇಮಕೆ, ನಾ ಕೊಡಲೇ ಕಾಣಿಕೆ
ಈ ನಮ್ಮ ಪ್ರೇಮಕೆ, ನಾ ಕೊಡಲೇ ಕಾಣಿಕೆ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ ।।೨।।