Kannada Songs

Kannada Songs's Lyrics

Beladingalagi Baa / ಬೆಳದಿಂಗಳಾಗಿ ಬಾ

ಬೆಳದಿಂಗಳಾಗಿ ಬಾ,
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ
 
ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ
ಬಾಳಲಿ ತುಂಬಿದೇ ಉಲ್ಲಾಸವಾ
ನನ್ನೆದೆಯ ತಾಳ ನೀನು, ನನ್ನುಸಿರ ರಾಗ ನೀನು
ನನ್ನೊಡಲ ಜೀವನೀ ಸಂತೋಷವೇ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ
ನೀನಿಲ್ಲವಾದರೆ  ಈ ಪ್ರಾಣ ನಿಲ್ಲದೆ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ ।।೧।।
 
ಕಾವೇರಿ ತಾಯಿ ನನ್ನಾ, ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂ
ಆ ದೇವಿಯಾಣೆ ನೀನೆ ಸಂಗಾತಿ ಕೇಳೇ ಜಾಣೆ,
ನೀಡುವೆನು ಭಾಷೆಯಾ,ಬಿಡು ಚಿಂತೆಯಾ
ಈ ನಮ್ಮ ಪ್ರೇಮಕೆ, ನಾ ಕೊಡಲೇ ಕಾಣಿಕೆ
ಈ ನಮ್ಮ ಪ್ರೇಮಕೆ, ನಾ ಕೊಡಲೇ ಕಾಣಿಕೆ
ಬೆಳದಿಂಗಳಾಗಿ ಬಾ , ತಂಗಾಳಿಯಾಗಿ ನಾನು,
ಆನಂದವಾ ನೀಡುವೇ, ಒಂದಾಗುವೇ
ಬೆಳದಿಂಗಳಾಗಿ ಬಾ ।।೨।।
                

Additional Information

ಗೀತಕಾರ : ಗೀತಪ್ರಿಯ , ಗಾಯಕ: ಡಾ. ರಾಜಕುಮಾರ್ , ಸಂಗೀತ ಸಂಯೋಜಕ: ಜಿ. ಕೆ. ವೆಂಕಟೇಶ್ , ಅಲ್ಬಮ್/ಚಲನಚಿತ್ರ : ಹುಲಿಯ ಹಾಲಿನ ಮೇವು / Lyricist : - Geetpriya , Singer : Dr Rajkumar, Music Director : G. K. Venkatesh, Album/Movie : Huliya Haalina Mevu

Kannada Songs Lyrics Submitted By

Shilpa Gavas

June 14 2016

geetmanjusha.com © 1999-2020 Manjusha Umesh | Privacy | Community Guidelines