ಪರ ತತ್ವವನು ಬಲ್ಲ ಪಂಡಿತನು ನಾನಲ್ಲ ಹರಿನಾಮವೊಂದುಳಿದು ನನಗೇನು ತಿಳಿದಿಲ್ಲ , ನನಗೇನು ತಿಳಿದಿಲ್ಲ ।। ಮಾನವಾ ದೇಹವು ಮೂಳೆ ಮಾಂಸದ ತಡಿಕೆ ಮಾನವಾ ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ ಮಾನವಾ ಮೂಳೆ ಮಾಂಸದ ತಡಿಕೆ ।।೧।। ನವ ಮಾಸಗಳು ಹೊಲಸಲಿ ಕಳೆದು ನವ ರಂದ್ರಗಳಾ ತಳೆದು ಬೆಳೆದು ಬಂದಿದೆ ಭುವಿಗೆ ಈ ನರ ಬೊಂಬೆ ನಂಬಲು ಏನಿದೆ ಸೌಭಾಗ್ಯವೆಂಬೆ ।।೨।। ಉಸಿರಾಡುವ ತನಕ ನಾನು ನನದೆಂಬ ಮಮಕಾರ, ನಿಂತ ಮರುಘಳಿಗೆ ಮಸಣದೇ ಸಂಸ್ಕಾರ, ಮಣ್ಣಲೀ ಬೆರೆತೂ ಮೆಲ್ಲಗೆ ಕೊಳೆತು ಮುಗಿಯುವಾ ದೇಹಕೇ, ವ್ಯಾಮೋಹವೇಕೇ ।।೩।। ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ, ಬರೀ ಕತ್ತಲೆ ಭಕ್ತಿಯ ಬೆಳಕು ಬಾಳಿಗೆ ಬೇಕು ಮುಕ್ತಿಗೆ ವಿಠಲನ ಕೊಂಡಾಡಬೇಕು ।।೪।। ವಿಠಲಾ ವಿಠಲಾ ಪಾಂಡುರಂಗ ವಿಠಲಾ ವಿಠಲಾ ವಿಠಲಾ ಪಾಂಡುರಂಗ ವಿಠಲಾ ವಿಠಲಾ ವಿಠಲಾ ಪಾಂಡುರಂಗ ವಿಠಲಾ ವಿಠಲಾ ವಿಠಲಾ ಪಾಂಡುರಂಗ ವಿಠಲಾ ವಿಠಲಾ ವಿಠಲಾ ಪಾಂಡುರಂಗ ವಿಠಲಾ ಪಾಂಡುರಂಗ ವಿಠಲಾ , ಪಾಂಡುರಂಗ ವಿಠಲಾ
geetmanjusha.com © 1999-2020 Manjusha Umesh | Privacy | Community Guidelines