Kannada Songs

Kannada Songs's Lyrics

Yalla Bheda Martu / ಎಲ್ಲಾ ಭೇದ ಮರೆತು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನ || 
೨ಸಲ ||ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು.. ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು … ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ .. ಎಲ್ಲರೂ ಕೈ ನೀಡಿಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ॒ಇದುವೆ ನವಗಾನಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು.. ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಆಲಸ ಬಿಡು ತಿಂದು.. ಆಲಸ ಬಿಡು ತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೆ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನುಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೆ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು ನಮ್ಮಲಿ ಭೇದವು ಎಕಾಗಿಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ದುವೆ ನವಗಾನ

Additional Information

गीतकार : -,संगीतकार : -,गायक : -, गीत संग्रह / चित्रपट : -/ Lyricist : -, Music Director : -, Singer : -, Movie : -

Kannada Songs Lyrics Submitted By

Swati Bhogle

Swati Bhogle

April 08 2013

geetmanjusha.com © 1999-2020 Manjusha Umesh | Privacy | Community Guidelines