Naavaduva Nudiye Kannada Nudi / ನಾವಾಡುವ ನುಡಿಯೇ ಕನ್ನಡ ನುಡಿ - Kannada Songs's Lyrics
Kannada Songs

Kannada Songs's Lyrics

Naavaduva Nudiye Kannada Nudi / ನಾವಾಡುವ ನುಡಿಯೇ ಕನ್ನಡ ನುಡಿ

ನಾವಾಡುವ ನುಡಿಯೇ ಕನ್ನಡ ನುಡಿ, 
ಚಿನ್ನದ ನುಡಿ, ಸಿರಿಗನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ, 
ಅಂದದ ಗುಡಿ, ಚೆಂದದ ಗುಡಿ 
ನಾವಾಡುವ ನುಡಿಯೇ ಕನ್ನಡ ನುಡಿ, 
ನಾವಿರುವ ತಾಣವೇ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ 
ಚಂದದ ಗುಡಿ ಶ್ರೀಗಂಧದ ಗುಡಿ
ಅಹಹ ಅಹಹ ಅಹಹ ಅಹಹ ಅಹಹ ಅಹಹ ॥
ಹಸುರಿನ ಬನಸಿರಿಗೇ ಒಲಿದು 
ಸೌಂದರ್ಯ ಸರಸ್ವತಿ ಧರೆಗಿಳಿದು 
ಅಹಹ ಒಹೊಹೊ ಅಹಹ ಒಹೊಹೊ
ಹರಿಯುವ ನದಿಯಲಿ ಈಜಾಡಿ 
ಹೂಬನದಲಿ ನಲಿಯುತ ಓಲಾಡಿ 
ಚೆಲುವಿನ ಬಲೆಯ ಬೀಸಿದಳೋ 
ಈ ಗಂಧದ ಗುಡಿಯಲಿ ನೆಲೆಸಿದಳೋ
ಇದು ಯಾರ ತಪಸಿನ ಫಲವೋ 
ಈ ಕಂಗಳು ಮಾಡಿದ ಪುಣ್ಯವೋ 
ಒಹೊಹೊ ಹ ಆ॥೧॥
ನಾವಿರುವ ತಾಣವೇ ಗಂಧದ ಗುಡಿ
ಚಿಮ್ಮುತ ಓಡಿವೆ ಜಿಂಕೆಗಳು 
ಕುಣಿದಾಡುತ ನಲಿದಿವೆ ನವಿಲುಗಳು 
ಆಹಹಹಾ ಮುಗಿಲನು ಚುಂಬಿಸೋ ಆಸೆಯಲಿ 
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು 
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ 
ಈ ಭೂಮಿಗೆ ಇಳಿದ ನಾಕವೋ
ಅಹಹಹ ಹೊಹೊ ॥೨॥
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ, 
ಅಂದದ ಗುಡಿ, ಗಂಧದ ಗುಡಿ, 
ಚೆಂದದ ಗುಡಿ, ಶ್ರಿಗಂಧದ ಗುದಿ
ಆಹಹಹ ಆಹಹಹ 
ಒಹೊಹೊ ಒಹೊಹೊ ಒಹೊ...ಹೊ...

Song Videos

Naavaduva Nudiya - Gandhada Gudi - Rajkumar - Shivaraj Kumar - Kannada Superhit SongEnjoy this wonderful song Naavaduva Nudiya from the movie Gandhada Gudi. For Daily Updates and Fun Stuff Subscribe at ...
Gandada Gudi kannada karaoke song with lyricsNavaduva nudiye kannada nudi kannada karaoke song with lyrics from movie "Gandada Gudi"

Additional Information

ಗೀತಕಾರ : ಚಿ. ಉದಯಶಂಕರ, ಗಾಯಕರು: ಪಿ. ಬಿ. ಶ್ರೀನಿವಾಸ, ಸಂಗೀತ ಸಂಯೋಜಕ: : ರಾಜನ್ - ನಾಗೇಂದ್ರ, ಆಲ್ಬಮ್/ಚಲನಚಿತ್ರ : ಗಂಧದ ಗುಡಿ (೧೯೭೩) / Lyricist : Chi. Udaya Shankar, Singer : P. B. Srinivas, Music Director : Rajan-Nagendra, Album/Movie : Gandhada gudi (1973)

Share this song

Kannada Songs Lyrics Submitted By

Shilpa Gavas

August 20 2016

geetmanjusha.com © 1999-2016 Manjusha Umesh | Privacy | Community Guidelines