Endendu Ninnanu / ಎಂದೆಂದೂ ನಿನ್ನನು - Kannada Songs's Lyrics
Kannada Songs

Kannada Songs's Lyrics

Endendu Ninnanu / ಎಂದೆಂದೂ ನಿನ್ನನು

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದುಕ್ಷಣ ವಿರಹವನು ನಾ ಸಹಿಸಲಾರೆ॥
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
 
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ॥೧॥
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

 
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲುಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ॥೨॥
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
 
ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ
ಸ್ವರ್ಗವು ಈ ಧರೆ ನಾ ನಿನ್ನ ಜೋಡಿಯಾಗಿ ಎಂದು
ಬಾಳುವೆ ಬಾಳುವೆ ಬಾಳುವೆ॥೩॥
ಎಂದೆಂದೂ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಆಹಾಹಾಹಾಹಾ..

Song Videos

endendu ninnanu - eradu kanasuಎಂದೆಂದು ನಿನ್ನನು ಎರಡು ಕನಸು ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಮ್ ರಾಜನ್ - ನಾಗೇಂದ್ರ.
Endendu Ninnanu - Eradu Kanasu - Kannada Classic RajkumarEnjoy this wonderful song Endendu Ninnanu from the movie Eradu Kanasu. For Daily Updates and Fun Stuff Subscribe at ...

Additional Information

ಗೀತಕಾರ : ಚಿ. ಉದಯಶಂಕರ, ಗಾಯಕರು: ಪಿ. ಬಿ. ಶ್ರೀನಿವಾಸ್ - ವಾಣಿ ಜಯರಾಂ, ಸಂಗೀತ ಸಂಯೋಜಕ: ರಾಜನ್ - ನಾಗೇಂದ್ರ, ಆಲ್ಬಮ್/ಚಲನಚಿತ್ರ : ಎರಡು ಕನಸು (೧೯೭೪) / Lyricist : Chi. Udaya Shankar, Singer : P. B. Srinivas - Vani Jayram, Music Director : Rajan - Nagendra, Album/Movie : Eradu Kanasu (1974)

Share this song

Kannada Songs Lyrics Submitted By

Shilpa Gavas

August 12 2016

geetmanjusha.com © 1999-2016 Manjusha Umesh | Privacy | Community Guidelines