Kannada Songs

Kannada Songs's Lyrics

Noorondu nenapu Bandhana / ನೂರೊಂದು ನೆನಪು ಬಂಧನ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ ॥
 
ಒಲವೆಂಬ ಲತೆಯು ತಂದಂತ ಹೂವು
ಮುಡಿಯೇರೆ ನಲಿವು, ಮುಡಿಜಾರೆ ನೋವು,
ಕೈಗೂಡಿದಾಗ, ಕಂಡಂಥ ಕನಸು
ಅದೃಷ್ಟದಾಟಾ ತಂದಂಥ ಸೊಗಸು 
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ 
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದಾ ॥೧॥
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
 
ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷವುಂಟು
ನಿನ್ನ ಹರುಷದಲಿ ನನ್ನಾ ಉಸಿರಿರಲಿ
ನಿನ್ನ ಹರುಷದಲಿ ನನ್ನಾ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದಾ ॥೨॥
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ..ಆನಂದದಿಂದ..ಆನಂದದಿಂದ

Song Videos

"Noorondu Nenapu" Kannada Feeling Song Full HD 1080p || Bandhana || SPB || Vishnuvardhan Hit SongsBandhana (Kannada: ಬಂಧನ) is a 1984 Indian Kannada language film directed by Rajendra Singh Babu, based on a novel Usha Navaratnanram of the same ...
Noorondu Nenapu Kannada Old Song - Bandhana Kannada Movie Songs HD 1080p | Vishnuvardhan Hit SongsBandhana 1984 film Bandhana (Kannada: ಬಂಧನ) is a 1984 Indian Kannada language film directed by Rajendra Singh Babu, based on a novel Usha ...

Additional Information

ಗೀತಕಾರ : ಆರ್. ಎನ್. ಜಯಗೋಪಾಲ, ಗಾಯಕ: ಎಸ್ ಪಿ ಬಾಲಸುಬ್ರಮಣ್ಯಂ , ಸಂಗೀತ ಸಂಯೋಜಕ: : ಎಂ. ರಂಗರಾವ್ , ಆಲ್ಬಮ್/ಚಲನಚಿತ್ರ : ಬಂಧನ(೧೯೮೪) / Lyricist : R N Jayagopal, Singer : S P Balasubrahmanyam, Music Director : M. Rangarao, Album/Movie : Bandhan (1984)

Share this song

Kannada Songs Lyrics Submitted By

Shilpa Gavas

August 12 2016

geetmanjusha.com © 1999-2017 Manjusha Umesh | Privacy | Community Guidelines